Telegram Join My Telegram WhatsApp Join My WhatsApp

Mysuru District Court Recruitment 2026 : 93 ಹುದ್ದೆಗಳ ಭರ್ತಿ 10ನೇ, 12ನೇ ಪಾಸ್ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ

ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಭ ಸುದ್ದಿಯನ್ನು ನೀಡಿದೆ. 2026 ರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಏಪ್ರೀಲ್‌ 28 ರಿಂದ ಪ್ರಾರಂಭವಾಗಿರುತ್ತದೆ. ಸರ್ಕಾರಿ ಉದ್ಯೋಗಗಳ ಆಕಾಂಕ್ಷಿ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.

ಮೈಸೂರು ಜಿಲ್ಲಾ ನ್ಯಾಯಾಲಯ ಒಟ್ಟು 93 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 31 ಮೇ 2026 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವ ಮೊದಲು ವೇತನ, ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ,ಹಾಗೂ ಇತರ ನೇಮಕಾತಿ ನಿಯಮಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.

ಜಿಲ್ಲಾ ನ್ಯಾಯಾಲಯ ನೇಮಕಾತಿ 2026:

ನೇಮಕಾತಿ ಪೂರ್ಣ ವಿವರಗಳು

  1. ನೇಮಕಾತಿ ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು
  2. ಅರ್ಜಿ ಸಲ್ಲಿಕೆ: ಆನ್‌ಲೈನ್‌
  3. ಮಾಸಿಕ ಸಂಭಾವನೆ: ನಿಯಮಗಳ ಪ್ರಕಾರ
  4. ಅರ್ಜಿ ಸಲ್ಲಿಕೆ ಪ್ರಾರಂಭ: ಏಪ್ರೀಲ್‌ 28
  5. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31

ಲಭ್ಯವಿರುವ ಹುದ್ದೆಗಳು : 93

  • ಸೇವಕರು: 75 ಹುದ್ದೆಗಳು
  • ಆದೇಶ ಜಾರಿಕಾರರು: 11 ಹುದ್ದೆಗಳು.
  • ಬೆರಳಚ್ಚು ನಕಲುಗಾರರು: 03 ಹುದ್ದೆಗಳು
  • ಶೀಘ್ರಲಿಪಿಗಾರರು ಗ್ರೇಡ್‌-III: 04 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

1  ಶೀಘ್ರಲಿಪಿಗಾರರು ಗ್ರೇಡ್‌ –III :

  • ಪದವಿ ಪೂರ್ವ ಶಿಕ್ಷಣ ಇಲಾಖೆಯು ನೆಡೆಸುವ ದ್ವತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಮೂರು ವರ್ಷಗಳ ಡಿಪ್ಲೊಮೊ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
  • ಕರ್ನಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನೆಡೆಸುವ ಕನ್ನಡ ಮತ್ತು ಆಂಗ್ಲ ಹಿರಿಯ ಶ್ರೇಣಿ ಬೆರಳಚ್ಚು(Typewriting Senior) ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ (Short Hand Senior) ಅಥವಾ ಮೂರು ವರ್ಷಗಳ ಡಿಪ್ಲೊಮೊ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳ ಉತ್ತೀರ್ಣರಾಗಿರಬೇಕು.

2  ಬೆರಳಚ್ಚು ನಕಲುಗಾರರು:

  • ಪದವಿ ಪೂರ್ವ ಶಿಕ್ಷಣ ಇಲಾಖೆಯು ನೆಡೆಸುವ ದ್ವತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ‌ ಅಥವಾ ತತ್ಸಮಾನ ವಿದ್ಯಾರ್ಹತೆ.
  • ಕರ್ನಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನೆಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ಶ್ರೇಣಿ ಬೆರಳಚ್ಚು(Typewriting Junior) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳ ಉತ್ತೀರ್ಣರಾಗಿರಬೇಕು.
  • ಕಛೇರಿ ಕಾರ್ಯ ಕಲಾಪಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್‌ ಬಳಕೆಯ ಜ್ಞಾನ ಅವಶ್ಯಕವಾಗಿರುತ್ತದೆ.

3  ಆದೇಶ ಜಾರೀಕಾರರು ಮತ್ತು ಸೇವಕರು:

  • SSLC /10ನೇ ತರಗತಿ ಪಾಸ್‌

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಸಾಮಾನ್ಯ ವರ್ಗ: 40 ವರ್ಷ
  • 2A, 2B, 3A, 3B ಅಭ್ಯರ್ಥಿಗಳು: 43 ವರ್ಷ
  • SC/ST ಹಾಗೂ Category-1 ಅಭ್ಯರ್ಥಿಗಳು: 45 ವರ್ಷ

ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ

ಆದೇಶ ಜಾರೀಕಾರರ ಹುದ್ದೆ

  • ಸಾಮಾನ್ಯ ಅಭ್ಯರ್ಥಿಗಳು: 300
  • 2A, 2B, 3A, 3B: 150
  • SC/ST/PH: ಶುಲ್ಕ ಇಲ್ಲ

ಸೇವಕರ ಹುದ್ದೆ

  • ಸಾಮಾನ್ಯ ಅಭ್ಯರ್ಥಿಗಳು: 200
  • 2A, 2B, 3A, 3B: 100
  • SC/ST/PH: ಶುಲ್ಕ ಇಲ್ಲ

ಬೆರಳಚ್ಚು ನಕಲುಗಾರರ ಹುದ್ದೆ

  • ಸಾಮಾನ್ಯ ಅಭ್ಯರ್ಥಿಗಳು: 300
  • Category-1: ಶುಲ್ಕ ಇಲ್ಲ

ಶೀಘ್ರಲಿಪಿಗಾರರು ಗ್ರೇಡ್‌-III ಹುದ್ದೆ

  • ಸಾಮಾನ್ಯ ಅಭ್ಯರ್ಥಿಗಳು: 300
  • 2A, 2B, 3A, 3B: 150
  • SC/ST/PH: ಶುಲ್ಕ ಇಲ್ಲ

ವೇತನ ವಿವರ

ಹುದ್ದೆ ವೇತನ
ಸ್ಟೆನೋಗ್ರಾಫರ್ ಗ್ರೇಡ್-III 44,425 – 83,700
ಪ್ರೊಸೆಸ್ ಸರ್ವರ್ 31,775 – 61,300
ಕಾಪಿಯಿಸ್ಟ್ 34,100 – 67,600
ಪಿಯೂನ್ 27,000 – 46,675

ಆಯ್ಕೆ ಪ್ರಕ್ರಿಯೆ

ಶೀಘ್ರಲಿಪಿಗಾರರು ಗ್ರೇಡ್‌-III

  • ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಅಂಕಗಳು ಮತ್ತು  ನಿಮಿಷ ಒಂದಕ್ಕೆ 120 ಪದಗಳ ದರದಲ್ಲಿ 05 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಕಂಪ್ಯೂಟರ್‌ನಲ್ಲಿ ಅನುಲಿಪಿ ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಶೇಕಡಾವಾರು ಅಂಕಗಳು ಮತ್ತು  ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  • ಸಂದರ್ಶನವು ಅರ್ಹತಾ ಪರೀಕ್ಷೆಗೆ ನಿಗದಿ ಪಡಿಸಿದ ಗರಿಷ್ಠ ಅಂಕಗಳ ಶೇಕಡ 5 ರಷ್ಟು ಇರುತ್ತದೆ.

ಬೆರಳಚ್ಚು ನಕಲುಗಾರರು

  • ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಅಂಕಗಳು ಮತ್ತು  15 ನಿಮಿಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಕಂಪ್ಯೂಟರ್‌ನಲ್ಲಿ ಬೆರಳಚ್ಚು ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಶೇಕಡಾವಾರು ಅಂಕಗಳು ಮತ್ತು  ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  • ಸಂದರ್ಶನವು ಅರ್ಹತಾ ಪರೀಕ್ಷೆಗೆ ನಿಗದಿ ಪಡಿಸಿದ ಗರಿಷ್ಠ ಅಂಕಗಳ ಶೇಕಡ 5 ರಷ್ಟು ಇರುತ್ತದೆ.

ಆದೇಶ ಜಾರೀಕಾರರು ಮತ್ತು ಸೇವಕರು

  • ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕಗಳ ಆಧಾರದ ಮೇಲೆ 01 ಹುದ್ದೆಗೆ 25 (ಆದೇಶ ಜಾರೀಕಾರರು) 01 ಹುದ್ದೆಗೆ 10 (ಸೇವಕರು) ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  • ಸಂದರ್ಶನವು 10 ಅಂಕಗಳನ್ನೊಳಗೊಂಡಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ.

ಪ್ರಮುಖ ಸೂಚನೆಗಳು

  • ಕೇವಲ ಆನ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ
  • ಅರ್ಜಿ ಶುಲ್ಕ ಮರುಪಾವತಿ ಇರುವುದಿಲ್ಲ
  • ದಾಖಲೆ ಪರಿಶೀಲನೆ ಕಡ್ಡಾಯ
  • ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದುವುದು ಕಡ್ಡಾಯ

ಮೈಸೂರು ಜಿಲ್ಲಾ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ, ನೀವು ತಕ್ಷಣ ಅಧಿಕೃತ ವೆಬ್‌ಸೈಟ್‌ https://mysuru.dcourts.gov.in/ ಗೆ ಭೇಟಿ ನೀಡಬೇಕು. ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ

Leave a Comment