Telegram Join My Telegram WhatsApp Join My WhatsApp

Karnataka High Court Recruitment 2026: 101 ಹುದ್ದೆಗಳ ನೇಮಕಾತಿ 10ನೇ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಭ ಸುದ್ದಿಯನ್ನು ನೀಡಿದೆ. 2026 ರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಏಪ್ರೀಲ್‌ 22 ರಿಂದ ಪ್ರಾರಂಭವಾಗಿರುತ್ತದೆ. ಸರ್ಕಾರಿ ಉದ್ಯೋಗಗಳ ಆಕಾಂಕ್ಷಿ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.

ಕರ್ನಾಟಕ ಹೈಕೋರ್ಟ್‌ ಒಟ್ಟು 101 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 21 ಮೇ 2026 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವ ಮೊದಲು ವೇತನ, ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ,ಹಾಗೂ ಇತರ ನೇಮಕಾತಿ ನಿಯಮಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಹೈಕೋರ್ಟ್‌ ನೇಮಕಾತಿ 2026:

ನೇಮಕಾತಿ ಪೂರ್ಣ ವಿವರಗಳು

  1. ನೇಮಕಾತಿ ಸಂಸ್ಥೆ: ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು
  2. ಅರ್ಜಿ ಸಲ್ಲಿಕೆ: ಆನ್‌ಲೈನ್‌
  3. ಮಾಸಿಕ ಸಂಭಾವನೆ: ನಿಯಮಗಳ ಪ್ರಕಾರ
  4. ಅರ್ಜಿ ಸಲ್ಲಿಕೆ ಪ್ರಾರಂಭ: ಏಪ್ರೀಲ್‌ 22
  5. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 21

ಲಭ್ಯವಿರುವ ಹುದ್ದೆಗಳು : 101

  • ಜವಾನ ಕಾವಲುಗಾರ ಸ್ವೀಪರ್‌ ಜವಾನ(ಹೌಸ್‌ ಕೀಪಿಂಗ್‌): 84+1 ಹುದ್ದೆಗಳು
  • ಲಿಪ್ಟ್‌ಅಟೆಂಡರ್‌: 05 ಹುದ್ದೆಗಳು.
  • ಸಹಾಯಕ ಬೈಂಡರ್‌: 01 ಹುದ್ದೆಗಳು
  • ದರ್ಜಿ  : 01 ಹುದ್ದೆಗಳು
  • ಧೋಬಿ : 01

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳು

  • ಜವಾನ ಕಾವಲುಗಾರ ಸ್ವೀಪರ್‌ ಜವಾನ(ಹೌಸ್‌ ಕೀಪಿಂಗ್‌): 8

ಶೈಕ್ಷಣಿಕ ಅರ್ಹತೆ:

ಜವಾನ,ಕಾವಲುಗಾರ, ಸ್ವೀಪರ್‌, ಜವಾನ(ಹೌಸ್‌ ಕೀಪಿಂಗ್)  :

  • ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಲಿಫ್ಟ್‌ ಅಟೆಂಡರ್‌:

  • ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಮತ್ತು ಲಿಫ್ಟ್‌  ಮೆಕ್ಯಾನಿಸಂನಲ್ಲಿ ಅನುಭವವನ್ನು ಹೊಂದಿರಬೇಕು.

ಸಹಾಯಕ ಬೈಂಡರ್‌:

  • ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಮತ್ತು ಬೈಂಡಿಂಗ್‌ ಕೆಲಸದಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.

4 ದರ್ಜೆ:

  • ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಮತ್ತು ದರ್ಜಿ ಕೆಲಸದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.

5 ಧೋಬಿ:

  • ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಮತ್ತು ಧೋಬಿ ಕೆಲಸದಲ್ಲಿ ಅನುಭವವನ್ನು ಹೊಂದಿರಬೇಕು.

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಸಾಮಾನ್ಯ ವರ್ಗ: 40 ವರ್ಷ
  • 2A, 2B, 3A, 3B ಅಭ್ಯರ್ಥಿಗಳು: 43 ವರ್ಷ
  • SC/ST ಹಾಗೂ Category-1 ಅಭ್ಯರ್ಥಿಗಳು: 45 ವರ್ಷ

ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳು: 200
  • 2A, 2B, 3A, 3B: 200
  • SC/ST/Category-1/PH: 100

ವೇತನ ವಿವರ

ಹುದ್ದೆ ವೇತನ
  • ಜವಾನ ಕಾವಲುಗಾರ ಸ್ವೀಪರ್‌ ಜವಾನ(ಹೌಸ್‌ ಕೀಪಿಂಗ್‌): 84+1 ಹುದ್ದೆಗಳು
19900-63200
  • ಲಿಪ್ಟ್‌ಅಟೆಂಡರ್‌: 05 ಹುದ್ದೆಗಳು.
21700 – 69,100
  • ಸಹಾಯಕ ಬೈಂಡರ್‌: 01 ಹುದ್ದೆಗಳು
19900-63200
  • ದರ್ಜಿ  : 01 ಹುದ್ದೆಗಳು
19900-63200
  • ಧೋಬಿ : 01
21700 – 69,100

 

ಆಯ್ಕೆ ಪ್ರಕ್ರಿಯೆ

  • ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕಗಳ ಆಧಾರದ ಮೇಲೆ ಹಾಗೂ ಮಹಿಳಾ ಮೀಸಲಾತಿ, ಗ್ರಾಮೀಣ ಅಭ್ಯರ್ಥಿ, ಮಾಜಿ ಸೈನಿಕ ಮತ್ತು ಇತರರು ಒಳಗೊಂಡಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಸರ್ಕಾರ ಹೊರಡಿಸಿದ ಆದೇಶಗಳನ್ನು ಗಣನೆಗೆ ತೆಗೆದುಕೊಂಡು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅರ್ಹತೆಯ ಆಧಾರದ ಮೇಲೆ ಸಿದ್ದಪಡಿಸಲಾಗುವುದು.
  • ಸಂದರ್ಶನಕ್ಕೆ ಕರೆಯಲ್ಪಡುವ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಲಾದ ಖಾಲಿ ಹುದ್ದೆಗಳ ಪ್ರತಿಯೊಂದು ವರ್ಗದಲ್ಲಿನ ಅರ್ಹತೆಯ ಕ್ರಮದಲ್ಲಿ ಅಧಿಸೂಚಿಸಲಾದ ಒಟ್ಟು ಖಾಲಿ ಹುದ್ದೆಗಳ 10 ಪಟ್ಟು ಸಂಖ್ಯೆಗೆ ಸಮನಾಗಿರತಕ್ಕದ್ದು.
  • ಸಂದರ್ಶನವು 10 ಅಂಕಗಳನ್ನೊಳಗೊಂಡಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ.

ಪ್ರಮುಖ ಸೂಚನೆಗಳು

  • ಕೇವಲ ಆನ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ
  • ಅರ್ಜಿ ಶುಲ್ಕ ಮರುಪಾವತಿ ಇರುವುದಿಲ್ಲ
  • ದಾಖಲೆ ಪರಿಶೀಲನೆ ಕಡ್ಡಾಯ
  • ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದುವುದು ಕಡ್ಡಾಯ

ಮೈಸೂರು ಜಿಲ್ಲಾ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ, ನೀವು ತಕ್ಷಣ ಅಧಿಕೃತ ವೆಬ್‌ಸೈಟ್‌ https://judiciary.karnataka.gov.in/  ಗೆ ಭೇಟಿ ನೀಡಬೇಕು. ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ

Leave a Comment